ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಮೊನ್ನೆ ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಆದರೆ, ಈಗ ಇದೇ ಮಿಥಾಲಿ ರಾಜ್, ಬಿಸಿಸಿಐನಲ್ಲಿ ಮಹತ್ವದ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
ನಾನು ಕಮೆಂಟೇಟರ್ ಆಗೋ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ನಾನು ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಸ್ವತಃ ಮಿಥಾಲಿ ರಾಜ್ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಆಟದಲ್ಲಿಯೇ ಅತಿ ಹೆಚ್ಚು ಅನುಭವ ಹೊಂದಿದ್ದೇನೆ. ಕ್ರಿಕೆಟ್ ಆಟಗಾರರಿಗೆ ಏನೂ ಬೇಕು.? ಆಟಗಾರರು ಬಯಸುವುದೇನು? ಅನ್ನೋದನ್ನ ತಿಳಿದುಕೊಂಡಿದ್ದೇನೆ. ಈ ಕಾರಣಕ್ಕೇನೆ ಬಿಸಿಸಿಐ ಆಡಳಿತ ಮಂಡಳಿಯಲ್ಲಿಯೇ ಕೆಲಸ ಮಾಡೋಕೆ ಇಷ್ಟಪಡುತ್ತೇನೆ ಅಂತಲೇ ಮಿಥಾಲಿ ರಾಜ್ ತಿಳಿಸಿದ್ದಾರೆ.
PublicNext
17/06/2022 07:37 am