ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಮೇಲೆ ದುಡ್ಡಿನ ಮಳೆಯಾಗಿದೆ. ಮುಂದಿನ ಐದು ವರ್ಷದಲ್ಲಿ ನಡೆಯಲಿರುವ 410 ಐಪಿಎಲ್ ಪಂದ್ಯಗಳ ಟಿವಿ ಹಾಗೂ ಡಿಜಿಟಲ್ ಪ್ರಸಾರದ ಹಕ್ಕುಗಳು ದಾಖಲೆಯ 48, 390 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಜೈ ಶಾ, ಐಪಿಎಲ್ ಒಂದು ಬ್ರಾಂಡ್ ಕ್ರಿಯೇಟ್ ಮಾಡಿದೆ. ಬರೋಬ್ಬರಿ 48,390 ಕೋಟಿಗೆ ಟಿವಿ ಮತ್ತು ಡಿಜಿಟಲ್ ರೈಟ್ಸ್ ಸೇಲ್ ಆಗಿದ್ದು, ಇಡೀ ಪ್ರಪಂಚದಲ್ಲೇ ಐಪಿಎಲ್ 2ನೇ ಶ್ರೀಮಂತ ಸ್ಪೋರ್ಟ್ಸ್ ಲೀಗ್ ಆಗಿದೆ ಎಂದು ಬರೆದುಕೊಂಡಿದ್ದಾರೆ.
ಸ್ಟಾರ್ ಇಂಡಿಯಾ 23,575 ಕೋಟಿಗೆ ಟಿವಿ ರೈಟ್ಸ್ ಬಿಡ್ ಮಾಡಿದೆ. Viacom18 ಐಪಿಎಲ್ ಡಿಜಿಟಲ್ ರೈಟ್ಸ್ ಸುಮಾರು 23,758 ಕೋಟಿಗೆ ತನ್ನದಾಗಿಸಿಕೊಂಡಿದೆ ಎಂದು ಜೈ ಶಾ ಟ್ವೀಟ್ ಮಾಡಿದ್ದಾರೆ.
PublicNext
14/06/2022 08:00 pm