ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅವಮಾನಕ್ಕೆ ಒಳಗಾದ ಘಟನೆ ನಡೆಯಿತು. ವಿಚಿತ್ರವೆಂದರೆ ಅವಮಾನ ಮಾಡಿದ್ದು ಬೇರೆ ಯಾರು ಅಲ್ಲ ಟೀಂ ಇಂಡಿಯಾ ಆಟಗಾರನೇ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಹೌದು. ನಿನ್ನೆಯ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಕೂಡ ಟೀಮ್ ಇಂಡಿಯಾಕ್ಕೆ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಟೀಂ ಇಂಡಿಯಾ ಇನ್ನಿಂಗ್ಸ್‌ನ 20ನೇ ಓವರ್ನ ಆನ್ರಿಚ್ ನಾರ್ಟ್ಜೆ ಅವರ ಮೂರನೇ ಎಸೆತದಲ್ಲಿ ಕಾರ್ತಿಕ್ ಸಿಂಗಲ್ ತೆಗೆದು, ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಸಿಕ್ಸ್ ಸಿಡಿಸಿದರು. ಐದನೇ ಎಸೆತದಲ್ಲಿ ಪಾಂಡ್ಯ ಸಿಕ್ಸ್ ಸಿಡಿಸಲು ಸಾಧ್ಯವಾಗದೆ ಡೀಪ್ ಮಿಡ್ ವಿಕೆಟ್ ಕಡೆ ಚೆಂಡನ್ನು ಅಟ್ಟಿದರು. ಆದರೆ ಈ ಬಾಲ್ನಲ್ಲಿ ಅವರು ಸಿಂಗಲ್ ರನ್ ಕೂಡ ಪಡೆದುಕೊಳ್ಳಲಿಲ್ಲ. ಕಾರ್ತಿಕ್ ಅತ್ತ ಕಡೆಯಿಂದ ರನ್ಗೆಂದು ಓಡಿ ಬಂದರೂ ಪಾಂಡ್ಯ ಬೇಡ ಎಂದು ತಡೆದರು. ಹಾರ್ದಿಕ್ಗಿಂತ ಅಪಾರ ಅನುಭವ ಹೊಂದಿರುವ ಕಾರ್ತಿಕ್ ಅವರಿಗೆ ಸ್ಟ್ರೈಕ್ ಕೊಡದೆ ತಾನೇ ಬ್ಯಾಟಿಂಗ್ ಮಾಡುತ್ತೇನೆ ಎಂದು ಹಾರ್ದಿಕ್ ವರ್ತಿಸಿದ್ದು ಇದೀಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
PublicNext
10/06/2022 12:21 pm