ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನ ಗುಜರಾತ್ ಟೈಟನ್ಸ್ ಸೋಲಿಸಿ ಕಪ್ ತನ್ನದಾಗಿಸಿಕೊಂಡಿದೆ. ಆದರೆ, ಗುಜರಾತ್ ಟೈಟನ್ಸ್ ನ ಕೋಚ್ ಆಶಿಶ್ ನೆಹ್ರಾ ಹಾಗೂ ರಾಜಸ್ಥಾನ ರಾಯಲ್ಸ್ ನ ಆಟಗಾರ ಯುಜ್ವೇಂದ್ರ ಚಹಲ್ ಈಗ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೇಜಾನ್ ಕಾಮೆಂಟ್ ಗಳೂ ಬರುತ್ತಿವೆ.
ಈ ಒಂದು ವೀಡಿಯೋದಲ್ಲಿ ಚಹಲ್ ಹಾಗೂ ಆಶಿಶ್ ನೆಹ್ರಾ ಕುಡಿದ ಮತ್ತಿನಲ್ಲಿಯೇ ತೂರಾಡಿ ಓಲಾಡಿದಂತಿದೆ. ಪತ್ನಿ ಜೊತೆಗೆ ಚಹಲ್ ಇಲ್ಲಿಗೆ ಬಂದಿದ್ರು. ಆಗ ಆಶಿಶ್ ನೆಹ್ರಾ ಬಂದು, ನಿನ್ನ ಹೆಂಡ್ತಿ ಮತ್ತು ನೀನು ಇಬ್ಬರೂ ಬಸ್ ನಲ್ಲಿಯೇ ಬನ್ನಿ ಅಂತಲೇ ಚಹಲ್ ಕಾರ್ ಬಳಿ ಬಂದು ಆಶಿಶ್ ನೆಹ್ರಾ ಕರೆಯುತ್ತಾರೆ.
ಬೇರೆ ಬೇರೆ ತಂಡದ ಈ ಇಬ್ಬರ ಈ ಪಾರ್ಟಿ ವೀಡಿಯೋ ಬೇಜಾನ್ ವೈರಲ್ ಆಗುತ್ತಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಲ್ಸ್ ತಂಡ ಮ್ಯಾಚ್ ಫಿಕ್ಸಿಂಗ್ ಏನಾದರೂ ಆಗಿದಿಯೇ ಅನ್ನೋ ಅನುಮಾನವನ್ನೂ ಹಲವರು ವ್ಯಕ್ತಪಡಿಸುತ್ತಿದ್ದಾರೆ.
PublicNext
08/06/2022 05:27 pm