ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧೋನಿಯಿಂದಾಗಿ 2008ರಲ್ಲೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪಡೆಯಲು ತೀರ್ಮಾನಿಸಿದ್ದೆ: ಸೆಹ್ವಾಗ್

ನವದೆಹಲಿ: ಎಂ.ಎಸ್.ಧೋನಿಯಿಂದಾಗಿ ನಾನು 2008ರಲ್ಲೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪಡೆಯಲು ತೀರ್ಮಾನಿಸಿದ್ದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಕ್ರಿಕ್ ಬಝ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ವೀರೇಂದ್ರ ಸೆಹ್ವಾಗ್, 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕನಾಗಿದ್ದಾಗ ಕೆಲ ಪಂದ್ಯಗಳಲ್ಲಿ ತನ್ನನ್ನು ಬೆಂಚ್‌ ಕಾಯಿಸಿದ್ದರಿಂದ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದೆ.

ಈ ಪ್ರವಾಸದಲ್ಲಿ ಕಳಪೆ ಫಾರ್ಮ್‌ನಿಂದಾಗಿ ಏಕದಿನ ತಂಡದಿಂದ ಸೆಹ್ವಾಗ್‌ರನ್ನ ಹೊರಗಿಡಲಾಯಿತು. ಹೀಗಾಗಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ, ಟೆಸ್ಟ್‌ ಕ್ರಿಕೆಟ್ ಆಡಲು ಮನಸ್ಸು ಮಾಡಿದ್ದೆ. ಈ ವೇಳೆ ಸಚಿನ್‌ ತೆಂಡೂಲ್ಕರ್‌ ನನ್ನನ್ನು ತಡೆದರು. ಇದು ನಿಮ್ಮ ವೃತ್ತಿ ಜೀವನದ ಕೆಟ್ಟ ಅವಧಿ. ಸದ್ಯಕ್ಕೆ ಸುಮ್ಮನೆ ಇರಿ ಹಾಗೂ ಆಸ್ಟ್ರೇಲಿಯಾ ಪ್ರವಾಸ ಮುಗಿಸಿಕೊಂಡು ಮನೆಗೆ ತೆರಳಿ, ಇದರ ಬಗ್ಗೆ ಆಳವಾಗಿ ಯೋಚನೆ ಮಾಡಿ. ತದನಂತರ ಈ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಿ' ಎಂದು ಸಚಿನ್ ಸಲಹೆ ನೀಡಿದ್ದರು. ಅದೃಷ್ಟವಶಾತ್‌ ಆ ವೇಳೆ ನಾನು ಓಡಿಐ ಕ್ರಿಕೆಟ್‌ಗೆ ವಿದಾಯ ಹೇಳಲಿಲ್ಲ" ಎಂದು ಸೆಹ್ವಾಗ್ ಕಿರು ನಗೆ ಬೀರಿದರು.

Edited By : Vijay Kumar
PublicNext

PublicNext

01/06/2022 10:29 pm

Cinque Terre

48.67 K

Cinque Terre

2