ಇಂಡೊನೇಷ್ಯಾ: ದಕ್ಷಿಣ ಕೊರಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡವು 4-4 ಗೋಲುಗಳಿಂದ ಡ್ರಾ ಸಾಧಿಸುವ ಮೂಲಕ ಏಷ್ಯಾ ಕಪ್ ಟೂರ್ನಿಯ ಫೈನಲ್ ಪ್ರವೇಶವನ್ನು ಕೈಚೆಲ್ಲಿಕೊಂಡಿದೆ.
ಸೂಪರ್ ಹಂತದ ಕೊನೆಯ ಪಂದ್ಯದಲ್ಲಿ ಬೀರೇಂದ್ರ ಲಾಕ್ರಾ ನೇತೃತ್ವದ ಭಾರತ ತಂಡವು ದಕ್ಷಿಣ ಕೊರಿಯಾದ ವಿರುದ್ಧ ಅದ್ಭುತ ಪ್ರದರ್ಶನ ತೋರಿದರೂ, ಪ್ರಶಸ್ತಿ ಸುತ್ತು ತಲುಪವಲ್ಲಿ ವಿಫಲವಾಯಿತು. ಇದಕ್ಕೂ ಮುನ್ನ ನಡೆದ ಮಲೇಷ್ಯಾ ಮತ್ತು ಜಪಾನ್ ನಡುವಿನ ಪಂದ್ಯದಲ್ಲಿ ಮಲೇಷ್ಯಾ 5-0ಯಿಂದ ಜಪಾನ್ ವಿರುದ್ಧ ಗೆಲುವು ಸಾಧಿಸಿತ್ತು. ಇದರಿಂದಾಗಿ ಭಾರತ, ಕೊರಿಯಾ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆ ಉಂಟಾಗಿತ್ತು.
ಮಲೇಷ್ಯಾ, ಭಾರತ ಮತ್ತು ದಕ್ಷಿಣ ಕೊರಿಯಾ ತಲಾ 5 ಪಾಯಿಂಟ್ಸ್ ಗಳಿಸಿದರೂ, ಗೋಲು ಗಳಿಕೆಯಲ್ಲಿ ಭಾರತ ಹಿಂದೆ ಬಿದ್ದ ಕಾರಣ, ಮಲೇಷ್ಯಾ ಮತ್ತು ಕೊರಿಯಾ ತಂಡಗಳು ಪ್ರಶಸ್ತಿ ಸುತ್ತು ಪ್ರವೇಶಿಸಿದವು. ನಾಳೆ(ಬುಧವಾರ) ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಜಪಾನ್ ತಂಡಗಳು ಮೂರನೇ ಸ್ಥಾನಕ್ಕಾಗಿ ಸೆಣಸಾಡಲಿವೆ. ಇನ್ನು ಅದೇ ದಿನ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ಫೈನಲ್ ಆಡಲಿವೆ.
PublicNext
31/05/2022 11:00 pm