ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಹದಿನೈದನೇ ಆವೃತ್ತಿಯ ಪಂದ್ಯಗಳು ನಡೆದಿದ್ದ ಒಟ್ಟು ಆರು ಮೈದಾನಗಳ ಗ್ರೌಂಡ್ಸ್‌ಮನ್‌ಗಳು ಹಾಗೂ ಪಿಚ್ ಕ್ಯುರೇಟರ್‌ಗಳಿಗೆ 1.25 ಕೋಟಿ ರೂ. ಮೊತ್ತವನ್ನು ಭಾರತೀಯ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರೆಬೋರ್ನ್ ಸ್ಟೇಡಿಯಂ, ಡಿ.ವೈ ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನಗಳಿಗೆ ತಲಾ 25 ಲಕ್ಷ ರೂ.ಗಳನ್ನು ಘೋಷಿಸಲಾಗಿದೆ. ಪ್ಲೇಆಫ್ಸ್ ಪಂದ್ಯಗಳು ಹಾಗೂ ಫೈನಲ್ ಪಂದ್ಯ ಜರುಗಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ಹಾಗೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗಳಿಗೆ ತಲಾ 12.5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಜಯ ಶಾ ಟ್ವೀಟ್ ಮಾಡಿದ್ದಾರೆ.
"2022ರ ಟಾಟಾ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪಂದ್ಯಗಳನ್ನು ಆಯೋಜಿಸಿದ್ದ ಮೈದಾನಗಳ ಸಹಾಯಕ ಸಿಬ್ಬಂದಿಗೆ ಒಟ್ಟು 1.25 ಕೋಟಿ ರೂ. ಗಳನ್ನು ನೀಡಲು ತಮಗೆ ಸಂತೋಷವಾಗುತ್ತಿದೆ. ಆರೂ ಮೈದಾನಗಳ ಪಿಚ್ ಕ್ಯುರೇಟರ್‌ಗಳು ಹಾಗೂ ಗ್ರೌಂಡ್ಸ್‌ಮನ್‌ಗಳು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸಿದ್ದಾರೆ" ಎಂದು ಜಯ ಶಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
PublicNext
31/05/2022 02:48 pm