ಅಹಮದಾಬಾದ್: ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಒಬೆದ್ ಮೆಕಾಯ್ ಎಸೆದ 19ನೇ ಓವರ್‌ನ ಮೊದಲ ಬಾಲ್ಗೆ ಶುಭ್ಮನ್ ಗಿಲ್ ಸಿಕ್ಸರ್ ಬಾರಿಸುವ ಮೂಲಕ ಗುಜರಾತ್ ಟೈಟನ್ಸ್ಗೆ ಟ್ರೋಫಿ ತಂದುಕೊಟ್ಟರು.
ಶುಭ್ಮನ್ ಗಿಲ್ ಸಿಕ್ಸರ್ ಸಿಡಿಸಿ ಗೆಲುವನ್ನು ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿಯಂತೆ ಗಿಲ್ ಸಂಭ್ರಮಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ವಾಸ್ತವವಾಗಿ ಗಿಲ್ ಸಿಕ್ಸರ್ ಬಾರಿಸಿದ ತಕ್ಷಣ, ಗೆಲುವಿನ ಸಂತೋಷದಲ್ಲಿ ಘರ್ಜಿಸಲು ಪ್ರಾರಂಭಿಸಿದರು. ಗಿಲ್ ಅವರ ಈ ಆಕ್ರಮಣಕಾರಿ ಆಚರಣೆಯನ್ನು ನೋಡಿದ ಅಭಿಮಾನಿಗಳು, ವಿರಾಟ್ ಕೊಹ್ಲಿಗೆ ಹೋಲಿಸಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಶುಭ್ಮನ್ ಗಿಲ್ 43 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿ 45 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು.
PublicNext
30/05/2022 04:04 pm