ಅಹ್ಮದಾಬಾದ್: ಐಪಿಎಲ್ ಪಂದ್ಯ ಮುಗಿದಿದೆ. ರಾಜಸ್ಥಾನ ತಂಡವನ್ನ ಗುಜರಾತ್ ಟೈಟನ್ಸ್ ತಂಡ ಸೋಲಿಸಿ ಗೆಲುವಿನ ನಗೆ ಬೀರಿದೆ. ಈ ಹಂತದಲ್ಲಿಯೇ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪತ್ನಿ ಮೈದಾನದಲ್ಲಿಯೇ ಪತಿಯನ್ನ ತಬ್ಬಿಕೊಂಡು ಭಾವುಕಳಾದ ವೀಡಿಯೋ ಈಗ ವೈರಲ್ ಆಗಿದೆ.
ಗುಜರಾತ್ ಮತ್ತು ರಾಜಸ್ಥಾನದ ನಡುವಿನ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಸಖತ್ ಮಿಂಚಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲೂ ಒಳ್ಳೆ ಆಟವನ್ನೇ ಪ್ರದರ್ಶನ ಮಾಡಿದ್ದು, 3 ವಿಕೆಟ್ ಪಡೆದು 34 ರನ್ ಅನ್ನೂ ಗಳಿಸಿ ತಂಡವನ್ನ ಗೆಲುವಿನತ್ತ ಕೊಂಡೊಯ್ದಿದ್ದಾರೆ.
ತಂಡದ ಗಿಲ್ ಹಾಗೂ ಮಿಲ್ಲರ್ ಅತ್ಯುತ್ತಮ ಆಟವನ್ನೂ ಪ್ರದರ್ಶಿಸಿದಿದ್ದಾರೆ. ಕೊನೆಗೆ ಗಿಲ್ ಸಿಕ್ಸರ್ ಬಾರಿಸೋ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು. ಇದೇ ವೇಳೆ ಇಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳು ಗುಜರಾತ್ ಅಂತ ಕೂಗಿದರು. ಹಾರ್ದಿಕ್ ಅಂತಲೂ ಕೂಗಿ..ಕೂಗಿ ಹೇಳಿದರು. ಇದಾದ ಬಳಿಕ ಹಾರ್ದಿಕಾ ಪಾಂಡ್ಯ ಪತ್ನಿ ನಟಾಶಾ ಮೈದಾನಕ್ಕೂ ಬಂದೇ ಬಿಟ್ಟರು. ಪತಿಯನ್ನ ತಬ್ಬಿಕೊಂಡು ಕೆಲ ಕ್ಷಣ ಭಾವುಕರಾದರು. ಈ ಕ್ಷಣದ ವೀಡಿಯೋ ಈಗ ವೈರಲ್ ಆಗಿದೆ.
PublicNext
30/05/2022 12:16 pm