ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅಬ್ಬರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಐಪಿಎಲ್ ಇತಿಹಾಸದಲ್ಲಿ ಜೋಸ್ ಬಟ್ಲರ್ ಐದನೇ ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನ ಸರಿಗಟ್ಟಿದ್ದಾರೆ. ಆರ್‌ಸಿಬಿ ಸೂಪರ್‌ಸ್ಟಾರ್ ಕೊಹ್ಲಿ ಒಟ್ಟಾರೆ ಐದು ಶತಕ ದಾಖಲಿಸಿದ್ದು, ಅಷ್ಟೇ ಮಟ್ಟಿಗೆ ಜೋಸ್ ಬಟ್ಲರ್ ಶತಕ ದಾಖಲಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್ ಐಪಿಎಲ್‌ನಲ್ಲಿ ಒಟ್ಟಾರೆ ಆರು ಶತಕ ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ಐಪಿಎಲ್ 2022ರಲ್ಲಿ ನಾಲ್ಕು ಶತಕ ಸಿಡಿಸಿದ ಜೋಸ್ ಬಟ್ಲರ್, ವಿರಾಟ್ ಕೊಹ್ಲಿ 2016ರಲ್ಲಿ ದಾಖಲಿಸಿದ್ದ 4 ಶತಕದ ದಾಖಲೆಯನ್ನೂ ಸಹ ಸರಿಗಟ್ಟಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ ಮೈಕಲ್ ಕ್ಲಿಂಗರ್ 2015ರಲ್ಲಿ 3 ಸೆಂಚುರಿ ಸಿಡಿಸಿದ್ದರು.
ಐಪಿಎಲ್ 15ನೇ ಸೀಸನ್‌ನಲ್ಲಿ ಜೋಸ್ ಬಟ್ಲರ್ ಬರೋಬ್ಬರಿ 800ಕ್ಕೂ ಹೆಚ್ಚು ರನ್ ಕಲೆಹಾಕುವ ಮೂಲಕ ಅಮೋಘ ದಾಖಲೆ ಮಾಡಿದ್ದಾರೆ. 16 ಪಂದ್ಯಗಳಲ್ಲಿ 824 ರನ್ ಕಲೆಹಾಕಿರುವ ಮೂಲಕ ಜಾಸ್ ಬಟ್ಲರ್ 4 ಶತಕ ಹಾಗೂ 4 ಅರ್ಧಶತಕ ದಾಖಲಿಸಿ ಅಗ್ರಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 2016ನೇ ಸೀಸನ್‌ನಲ್ಲಿ 4 ಶತಕ ಸಿಡಿಸಿದ್ದು, 900ಕ್ಕೂ ಹೆಚ್ಚು ರನ್ ಕಲೆಹಾಕಿದ್ದರು.
PublicNext
28/05/2022 08:02 am