ಮುಂಬೈ: ಐಪಿಎಲ್ 15ನೇ ಆವೃತ್ತಿಯ ಫೈನಲ್ ಪಂದ್ಯದ ಸಮಯ ಬದಲಾವಣೆಯಾಗಿದೆ. ರಾತ್ರಿ 7:30ಕ್ಕೆ ಆರಂಭವಾಗಬೇಕಿದ್ದ ಪಂದ್ಯನ್ನು ಅರ್ಧ ಗಂಟೆ ತಡವಾಗಿ ಆರಂಭಿಸಲು ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಹೌದು ಐಪಿಎಲ್ ಫೈನಲ್ ಪಂದ್ಯ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 29 ಭಾನುವಾರ ರಂದು ನಡೆಸಲು ಈಗಾಗಲೇ ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6:30ಕ್ಕೆ ಮತ್ತು ಪಂದ್ಯದ ಬಳಿಕ 50 ನಿಮಿಷಗಳ ಕಾಲ ಸಮಾರೋಪ ಸಮಾರಂಭ ನಡೆಯಲಿದೆ. ಹಾಗಾಗಿ ಪಂದ್ಯವನ್ನು ರಾತ್ರಿ 7:30ರ ಬದಲಾಗಿ 8 ಗಂಟೆಗೆ ಆರಂಭಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.
PublicNext
19/05/2022 05:56 pm