ಬರ್ಲಿನ್: ಬಾಕ್ಸಿಂಗ್ ರಿಂಗ್‌ನಲ್ಲೇ ಯುವ ಬಾಕ್ಸರ್ ಮೂಸಾ ಯಮಕ್‌ಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಜರ್ಮನಿಯ ಮ್ಯೂನಿಚ್ನಲ್ಲಿ ನಡೆದಿದೆ.
ಯುವ ಬಾಕ್ಸರ್ ಮೂಸಾ ಯಮಕ್ ಅವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸೋಲಿಲ್ಲದ ಸರದಾರನಾಗಿದ್ದ ಮೂಸಾ ಯಮಕ್ ಈವರೆಗೂ ತಾವು ಆಡಿರುವ 75 ಪಂದ್ಯಗಳಲ್ಲಿ ಎದುರಾಳಿಗಳನ್ನು ಮಣಿಸಿ ಗೆಲುವು ದಾಖಲಿಸಿದ್ದರು. ಅವರ ದಿಢೀರ್ ಸಾವಿನಿಂದ ಕ್ರೀಡಾ ವಲಯ ಆಘಾತಕ್ಕೊಳಗಾಗಿದೆ.
ಜರ್ಮನಿಯಲ್ಲಿ ವಾಸವಾಗಿದ್ದ ಬಾಕ್ಸರ್ ಮೂಸಾ ಯಮಕ್, ಕೇವಲ 12ನೇ ವಯಸ್ಸಿನಲ್ಲಿದ್ದಾಗಲೇ ಬಾಕ್ಸಿಂಗ್ ವೃತ್ತಿ ಬದುಕು ಆರಂಭಿಸಿದ್ದರು. ಡಬ್ಲ್ಯುಬಿಎಫ್ ಮತ್ತು ಜಿಬಿಯು ಸ್ಪರ್ಧೆಗಳಲ್ಲಿ ಭಾಗಿಯಾಗಿ, ವಿಜಯಶಾಲಿಯಾಗಿದ್ದ ಇವರು ಹೆವಿವೇಯ್ಟ್ ಬಾಕ್ಸಿಂಗ್‌ನಲ್ಲಿ ಯುರೋಪಿಯನ್-ಏಷ್ಯನ್ ಚಾಂಪಿಯನ್ ಸಹ ಆಗಿದ್ದರು. ಜರ್ಮನಿಯ ಮ್ಯೂನಿಚ್ನಲ್ಲಿ ಬುಧವಾರ ನಡೆದ 84+ ಕೆಜಿ ಬಾಕ್ಸಿಂಗ್ ಪಂದ್ಯದ ಮೂರನೇ ಸುತ್ತಿನಲ್ಲಿ ಅವರು ಎದುರಾಳಿ ವಿರುದ್ಧ ಸೆಣಸಾಟ ನಡೆಸಿದ್ದ ಸಂದರ್ಭದಲ್ಲಿ ದಿಢೀರ್ ಹೃದಯಾಘಾತಕ್ಕೊಳಗಾಗಿ, ಕುಸಿದುಬಿದ್ದಿದ್ದರು. ಈ ವೇಳೆ ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಸಾವನ್ನಪ್ಪಿದ್ದಾರೆಂದು ವೈದ್ಯರು ಘೋಷಣೆ ಮಾಡಿದ್ದಾರೆ.
PublicNext
19/05/2022 05:24 pm