ಮುಂಬೈ: ಕೊನೆಯ ಎಸೆತದವರೆಗೂ ಭಾರಿ ರೋಚಕತೆಗೆ ಸಾಕ್ಷಿಯಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 2 ರನ್‌ಗಳಿಂದ ಗೆದ್ದು ಬೀಗಿದೆ.
ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 66ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 210 ರನ್ ಬಾರಿಸಿತ್ತು. ತಂಡದ ಪರ ಕ್ವಿಂಟನ್ ಡಿ ಕಾಕ್ 140 ರನ್ (70 ಎಸೆತ, 10 ಬೌಂಡರಿ, 10 ಸಿಕ್ಸರ್), ಕೆ.ಎಲ್.ರಾಹುಲ್ 68 ರನ್ (51 ಎಸೆತ, 3 ಬೌಂಡರಿ, 4 ಸಿಕ್ಸರ್) ಬಾರಿಸಿದ್ದರು.
ಬಳಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡವು 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ಸೋಲು ಒಪ್ಪಿಕೊಂಡಿದೆ. ತಂಡದ ಪರ ನಿತೀಶ್ ರಾಣಾ 42 ರನ್ (22 ಎಸೆತ), ನಾಯಕ ಶ್ರೇಯಸ್ ಅಯ್ಯರ್ 50 ರನ್ (29 ಎಸೆತ), ಸ್ಯಾಮ್ ಬಿಲ್ಲಿಂಗ್ಸ್ 36 ರನ್ (24 ಎಸೆತ), ರಿಂಕು ಸಿಂಗ್ 40 ರನ್ (15 ಎಸೆತ) ಹಾಗೂ ಸುನಿಲ್ ನರೈನ್ 21 ರನ್ ಗಳಿಸಿದರು.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಪರ ಮೊಹ್ಸಿನ್ ಖಾನ್, ಮಾರ್ಕಸ್ ಸ್ಟೊಯಿನಿಸ್ 3 ವಿಕೆಟ್ ಕಿತ್ತು ಮಿಂಚಿದರೆ, , ಕೃಷ್ಣಪ್ಪ ಗೌತಮ್ ಹಾಗೂ ರವಿ ಬಿಷ್ಣೋಯ್ ತಲಾ 1 ತಲಾ ವಿಕೆಟ್ ಪಡೆದುಕೊಂಡರು.
PublicNext
18/05/2022 11:35 pm