ಮುಂಬೈ: ಕ್ರಿಕೆಟರ್ ರವೀಂದ್ರ ಜಡೇಜಾ ಈಗ ಸಿಎಸ್‌ಕೆ ತಂಡದಲ್ಲಿ ಆಡೋದೇ ಡೌಟು. ನಾಯಕತ್ವದಿಂದ ಇಳಿಸಿದ್ದೇ ತಡ, ಫುಲ್ ಗರಂ ಆಗಿದ್ದಾರೆ.
ರವೀಂದ್ರ ಜಡೇಜಾ ತಾವೇ ಸಿಎಸ್‌ಕೆ ತಂಡದ ನಾಯಕತ್ವ ಬಿಟ್ಟಿದ್ದಾರೆ ಅನ್ನೋ ಮಾತು ಕೇಳಿ ಬಂತು. ಆದರೆ, ಸತ್ಯ ಅದಲ್ಲವೇ ಅಲ್ಲ. ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಈ ನಾಯಕನನ್ನ ಬಲವಂತವಾಗಿಯೇ ನಾಯಕತ್ವ ಪಟ್ಟದಿಂದ ಕಳೆಗೆ ಇಳಿಸಿದೆ.
ಈ ಕಾರಣಕ್ಕೆ ರವೀಂದ್ರ ಜಡೇಜಾ ಸಿಟ್ಟಾಗಿದ್ದಾರೆ. ಇನ್ಮುಂದೆ ನಾನು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡೋದಿಲ್ಲ ಅಂತಳೂ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ದುರಂತ ಅಂದ್ರೆ, ಸೋಷಿಯಲ್ ಮೀಡಿಯಾದಲ್ಲಿ ಸಿಎಸ್‌ಕೆ ಕ್ರಿಕೆಟರ್ ರವೀಂದ್ರ ಜಡೇಜಾರನ್ನ ಅನ್ ಫಾಲೋ ಮಾಡಿ ಬಿಟ್ಟಿದೆ.
PublicNext
18/05/2022 09:39 am