ಮುಂಬೈ: ಮಿಚೆಲ್ ಮಾರ್ಷ್ ಸಮಯೋಚಿತ ಅರ್ಧಶತಕದ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡಕ್ಕೆ 160 ರನ್‌ಗಳ ಸವಾಲು ನೀಡಿದೆ.
ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 64ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ತಂಡದ ಪರ ಮಿಚೆಲ್ ಮಾರ್ಷ್ 63 ರನ್, ಸರ್ಫರಾಜ್ ಖಾನ್ 32 ರನ್ ಹಾಗೂ ಲಲಿತ್ ಯಾದವ್ 24 ರನ್ ಗಳಿಸಿದರು.
ಇನ್ನು ಪಂಜಾಬ್ ಪರ ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಪಡೆದುಕೊಂಡರೆ, ಕಗಿಸೊ ರಬಾಡ ಒಂದು ವಿಕೆಟ್ ಕಿತ್ತರು.
PublicNext
16/05/2022 09:27 pm