ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಲ್ ರೌಂಡರ್ ಆಂಡ್ರೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಆಸೀಸ್ ನ ಕ್ವೀನ್ಸ್ ಲ್ಯಾಂಡ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್ ಮೃತಪಟ್ಟಿದ್ದಾರೆ.
ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್, 198 ಏಕ ದಿನ ಪಂದ್ಯ ಹಾಗೂ 20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನ ಆಡಿದ್ದಾರೆ.
ಸೈಮಂಡ್ಸ್ 2012 ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಏಕ ದಿನ ಪಂದ್ಯದ ಸ್ಪೆಷಲ್ ಆಟಗಾರ ಆಗಿದ್ದರು ಸೈಮಂಡ್ಸ್. 2003 ಹಾಗೂ 2007 ವಿಶ್ವ ಕಪ್ ಗೆದ್ದ ತಂಡದಲ್ಲೂ ಸೈಮಂಡ್ಸ್ ಭಾಗಿ ಆಗಿದ್ದರು.
PublicNext
15/05/2022 07:18 am