ಐಪಿಎಲ್ 15 ನೇ ಆವೃತ್ತಿಯಲ್ಲಿ ಆರ್ ಸಿ ಬಿ ಮತ್ತು ಪಂಜಾಬ್ ಪಂದ್ಯ ನಡೆಯುತ್ತಿರುವ ವೇಳೆ ಸ್ಟೇಡಿಯಂಗೆ ಕರಿ ಬೆಕ್ಕು ಎಂಟ್ರಿ ಕೊಟ್ಟು ಪಂದ್ಯಕ್ಕೆ ಅಡಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಹೌದು RCB ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿ, ಬೆಕ್ಕು ಗ್ಯಾಲರಿಯಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಪರದೆಯಲ್ಲಿ ಕಂಡ ಆಟಗಾರರು ಪಂದ್ಯವನ್ನು ಸ್ವಲ್ಪ ಸಮಯಕ್ಕೆ ನಿಲ್ಲಿಸಿ ಮತ್ತೆ ಆರಂಭಿಸಿದರು.
ಇನ್ನು ಈ ವಿಡಿಯೋ ಕಂಡ ಅಭಿಮಾನಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕ್ಯಾಟ್ 1-0 ಐಪಿಎಲ್, "13 ನೇ ಶುಕ್ರವಾರದಂದು ಕಪ್ಪು ಬೆಕ್ಕು", ಕರಿ ಬೆಕ್ಕು ಕಂಡಿದ್ದು ಲಕ್ ಹೀಗೆ ಬೇರೆ ಬೇರೆ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆಯಲ್ಲಿ ಸ್ಟೇಡಿಯಂನ ದೊಡ್ಡ ಪರದೆಯಲ್ಲಿ ಕಂಡ ಕರಿ ಬೆಕ್ಕು ಅಭಿಮಾನಿಗಳು ಹಾಗೂ ಆಟಗಾರರ ಗಮನ ಸೆಳೆದಿದಂತೂ ಸುಳ್ಳಲ್ಲ.
PublicNext
14/05/2022 10:49 am