ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಆರ್‌.ಅಶ್ವಿನ್ ಫಿಫ್ಟಿ, ಪಡಿಕ್ಕಲ್ ಅಬ್ಬರ- ಡೆಲ್ಲಿಗೆ 161 ರನ್‌ಗಳ ಗುರಿ

ಮುಂಬೈ: ಆರ್‌.ಅಶ್ವಿನ್ ಅರ್ಧಶತಕ, ದೇವದತ್ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ಗೆ 161 ರನ್‌ಗಳ ಸವಾಲು ಒಡ್ಡಿದೆ.

ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 58ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 6 ವಿಕೆಟ್ ನಷ್ಟಕ್ಕೆ 160 ರನ್‌ ಗಳಿಸಿದೆ.

ರಾಜಸ್ಥಾನ್ ಪರ ಆರ್‌.ಅಶ್ವಿನ್ 50 ರನ್, ದೇವದತ್ ಪಡಿಕ್ಕಲ್ 48 ರನ್ ಹಾಗೂ ಯಶಸ್ವಿ ಜೈಸ್ವಾಲ್ 19 ರನ್‌ ಗಳಿಸಿದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಚೇತನ್ ಸಕರಿಯಾ, ಆನ್ರಿಚ್ ನಾರ್ಟ್ಜೆ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದುಕೊಂಡರು.

Edited By : Vijay Kumar
PublicNext

PublicNext

11/05/2022 09:32 pm

Cinque Terre

40.63 K

Cinque Terre

0

ಸಂಬಂಧಿತ ಸುದ್ದಿ