ಮುಂಬೈ: ಐಪಿಎಲ್ 2022ರ ಭಾಗವಾಗಿ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಿನ್ನೆ (ಭಾನುವಾರ) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ ಧೋನಿ ತಮ್ಮ ಬ್ಯಾಟ್ ಕಚ್ಚಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಡೆಲ್ಲಿಗೆ 209 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಲು ಸಿಎಸ್ಕೆಗೆ ಎಂ.ಎಸ್ ಧೋನಿ ಆಟ ಮುಖ್ಯವಾಗಿತ್ತು. ಕೇವಲ 8 ಎಸೆಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 21 ರನ್ ಚಚ್ಚಿದರು. ಆದರೆ ಧೋನಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬರುವ ಮುನ್ನ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತುಕೊಂಡು ಬ್ಯಾಟ್ ಕಚ್ಚುತ್ತಿರುವುದನ್ನು ಕ್ಯಾಮೆರಾ ಮ್ಯಾನ್ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ಎಂಎಸ್ಡಿ ಏತಕ್ಕಾಗಿ ಬ್ಯಾಟ್ ಕಚ್ಚುತ್ತಿದ್ದಾರೆ ಎಂದು ಅನೇಕರು ತಲೆ ಕೆಡೆಸಿಕೊಂಡಿದ್ದಾರೆ. ಇದಕ್ಕೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಮಿಶ್ರಾ, "ಎಂಎಸ್ ಧೋನಿ ಆಗಾಗ್ಗೆ ಅವರ ಬ್ಯಾಟ್ ಅನ್ನು ಏಕೆ ಕಚ್ಚುತ್ತಾರೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಧೋನಿ ತನ್ನ ಬ್ಯಾಟ್ ಸ್ವಚ್ಛವಾಗಿರಲು ಇಷ್ಟಪಡುವ ಕಾರಣ ಬ್ಯಾಟ್ನ ಟೇಪ್ ಅನ್ನು ತೆಗೆದುಹಾಕಲು ಈ ರೀತಿ ಮಾಡುತ್ತಾರೆ. ಹೀಗಾಗಿ ಧೋನಿ ಬ್ಯಾಟ್‌ನಿಂದ ಒಂದೇ ಒಂದು ತುಂಡು ಟೇಪ್ ಅಥವಾ ನೂಲಾಗಲಿ ಹೊರಬರುವುದನ್ನು ನೀವು ನೋಡಿರಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.
PublicNext
09/05/2022 12:26 pm