ಮುಂಬೈ: ನಿನ್ನೆ (ಶನಿವಾರ) ಮಧ್ಯಾಹ್ನ ನಡೆದ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಕನ್ನಡಿಗ, ರಾಜಸ್ಥಾನ್ ತಂಡದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಪಂಜಾಬ್‌ನ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ವಿಕೆಟ್ ಪಡೆದಿದ್ದೇ ರೋಚಕ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಸಿದ್ಧ ಕೃಷ್ಣ ಬೌಲಿಂಗ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ಇನ್ನಿಂಗ್ಸ್‌ನ ಕೊನೆಯ ಎರಡನೇ ಓವರ್‌ನಲ್ಲಿ ಬೌಲರ್ ಪ್ರಸಿದ್ಧ ಕೃಷ್ಣ ಎಸೆದ ಚೆಂಡು ವೈಡ್ ಲೈನ್ ಮೇಲೆ ಹೋದರೂ ಅಂಪೈರ್ ವೈಡ್ ಎಂದು ತೀರ್ಪು ನೀಡಲಿಲ್ಲ. ಇದರಿಂದಾಗಿ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಆಫ್-ಸ್ಟಂಪ್‌ನ ಹೊರಗೆ ನಿಂತು ಅಸಮಾಧಾನ ಹೊರ ಹಾಕಿದರು. ಇದರಿಂದಾಗಿ ಪ್ರಸಿದ್ಧ್ ಕೃಷ್ಣ ಅಂಪೈರ್‌ಗೆ ದೂರು ನೀಡಿದರು. ಬಳಿಕ ಲಿಯಾಮ್ ಲಿವಿಂಗ್‌ಸ್ಟೋನ್ ಒಂದು ಸಿಕ್ಸ್, ಒಂದು ಬೌಂಡರಿ ಬಾರಿಸಿದರು. ಈ ವೇಳೆ ಭರ್ಜರಿ ಬೌಲಿಂಗ್ ಮಾಡಿದ ಪ್ರಸಿದ್ಧ ಕೃಷ್ಣ ಅವರು ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನ ಕ್ಲೀನ್ ಬೋಲ್ಡ್ ಮಾಡಿದರು.
PublicNext
08/05/2022 11:06 am