ಮುಂಬೈ: ಐಪಿಎಲ್ 2022ರ ಭಾಗವಾಗಿ 54ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಇಂದು ಮಧ್ಯಾಹ್ನ 3:30ಕ್ಕೆ ನಡೆಯಲಿದೆ.
ಅಂಕಪಟ್ಟಿಯಲ್ಲಿ ಆರ್‌ಸಿಬಿ 4ನೇ ಸ್ಥಾನದಲ್ಲಿದ್ದು, ಹೈದರಾಬಾದ್ ತಂಡವು 6ನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡವು ಗೆಲುವು ಸಾಧಿಸಿದರೆ 4ನೇ ಸ್ಥಾನಕ್ಕೆ ಜಿಗಿಯಲಿದೆ. ಇದರಿಂದಾಗಿ ಆರ್‌ಸಿಬಿಗೆ ಕ್ವಾಲಿಫಯರ್ ಪ್ರವೇಶ ಕಠಿಣವಾಗಲಿದೆ. ಹೀಗಾಗಿ ಆರ್‌ಸಿಬಿಗೆ ಇಂದಿನ ಪಂದ್ಯವು ಭಾರಿ ಮಹತ್ವದ್ದಾಗಿದೆ.
PublicNext
08/05/2022 07:34 am