ಮುಂಬೈ: ಕ್ವಿಂಟನ್ ಡಿ ಕಾಕ್ ಅರ್ಧಶತಕ, ದೀಪಕ್ ಹೂಡಾ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 177 ರನ್‌ಗಳ ಸವಾಲು ಒಡ್ಡಿದೆ.
ಪುಣೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 53ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ. ತಂಡದ ಪರ ಕ್ವಿಂಟನ್ ಡಿ ಕಾಕ್ 50 ರನ್ (29 ಎಸೆತ), ದೀಪಕ್ ಹೂಡಾ 41 ರನ್ (27 ಎಸೆತ), ಮಾರ್ಕಸ್ ಸ್ಟೊಯಿನಿಸ್ 28 ರನ್ (14 ಎಸೆತ), ಕೃನಾಲ್ ಪಾಂಡ್ಯ 25 ರನ್ ಗಳಿಸಿದರು.
ಇನ್ನು ಕೆಕೆಆರ್ ಪರ ಆಂಡ್ರೆ ರಸೆಲ್ 2 ವಿಕೆಟ್ ಪಡೆದುಕೊಂಡರೆ, ಸುನಿಲ್ ನರೈನ್, ಶಿವಂ ಮಾವಿ ಹಾಗೂ ಟಿಮ್ ಸೌಥಿ ತಲಾ 1 ವಿಕೆಟ್ ಕಿತ್ತರು.
PublicNext
07/05/2022 09:34 pm