ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಗುಜರಾತ್ ವಿರುದ್ಧ ಮುಂಬೈಗೆ ರೋಚಕ ಗೆಲುವು

ಮುಂಬೈ: ಕೊನೆಯ ಎಸೆತದವರೆಗೂ ಭಾರಿ ರೋಚಕತೆ ಮೂಡಿಸಿದ್ದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಮುಂಬೈ ಇಂಡಿಯನ್ಸ್

ತಂಡವು 5 ರನ್‌ಗಳಿಂದ ಗೆದ್ದು ಬೀಗಿದೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 51ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 6 ವಿಕೆಟ್ ನಷ್ಟಕ್ಕೆ 177 ರನ್‌ ಗಳಿಸಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 5 ವಿಕೆಟ್‌ ನಷ್ಟಕ್ಕೆ172 ರನ್‌ ಗಳಿಸಿ ಸೋಲಿಗೆ ತುತ್ತಾಯಿತು. ತಂಡದ ಪರ ಶುಭ್ಮನ್ ಗಿಲ್ 52 ರನ್ (36 ಎಸೆತ), ವೃದ್ಧಿಮಾನ್ ಸಹಾ 55 ರನ್ (40 ಎಸೆತ) ಹಾಗೂ ಹಾರ್ದಿಕ್ ಪಾಂಡ್ಯ 24 ರನ್‌ ಗಳಿಸಿದರು.

ಇದಕ್ಕೂ ಮುನ್ನ ಮುಂಬೈ ಪರ ರೋಹಿತ್ ಶರ್ಮಾ 43 ರನ್, ಇಶಾನ್ ಕಿಶನ್ 45 ರನ್ ಹಾಗೂ ಟಿಮ್ ಡೇವಿಡ್ 44 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿದ ಸೂರ್ಯಕುಮಾರ್ ಯಾದವ್ 13 ರನ್, ಕೀರಾನ್ ಪೊಲಾರ್ಡ್ 4 ರನ್‌ಗೆ ವಿಕೆಟ್‌ ಕಳೆದುಕೊಂಡಿದ್ದರು. ಇನ್ನು ಗುಜರಾತ್ ಪರ ರಶೀದ್ ಖಾನ್ 2 ವಿಕೆಟ್ ಕಿತ್ತರೆ, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್ ಹಾಗೂ ಪ್ರದೀಪ್ ಸಾಂಗ್ವಾನ್ ತಲಾ 1 ವಿಕೆಟ್ ಪಡೆದುಕೊಂಡಿದ್ದರು.

Edited By : Vijay Kumar
PublicNext

PublicNext

06/05/2022 11:32 pm

Cinque Terre

63.06 K

Cinque Terre

0

ಸಂಬಂಧಿತ ಸುದ್ದಿ