ಮುಂಬೈ: ನಿತೀಶ್ ರಾಣಾ, ರಿಙಕು ಸಿಂಗ್ ಅಬ್ಬರ ಜೊತೆಯಾಟದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 47ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ 5 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 158 ರನ್ ಚಚ್ಚಿ ಗೆದ್ದು ಬೀಗಿದೆ. ಕೆಕೆಆರ್ ಪರ ರಿಂಕು ಸಿಂಗ್ 42 ರನ್ (23 ಎಸೆತ), ನಿತೀಶ್ 48 ರನ್ (37 ಎಸೆತ) ಹಾಗೂ ನಾಯಕ ಶ್ರೇಯಸ್ ಅಯ್ಯರ್ 34 ರನ್ ಗಳಿಸಿದರು.
ಉದಕ್ಕೂ ಮುನ್ನ ರಾಜಸ್ಥಾನ್ ತಂಡದ ಪರ ನಾಯಕ ಸಂಜು ಸ್ಯಾಮ್ಸನ್ 54 ರನ್, ಶಿಮ್ರಾನ್ ಹೆಟ್ಮೇಯರ್ 27 ರನ್ ಹಾಗೂ ಜೋಸ್ ಬಟ್ಲರ್ 22 ರನ್ ಗಳಿಸಿದ್ದರು.
PublicNext
03/05/2022 06:19 am