ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್​​​ನಲ್ಲಿ ಕೆ.ಎಲ್. ರಾಹುಲ್​​ ಸಿಕ್ಸರ್ ಸಾಧನೆ

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ 2022ರ ಟೂರ್ನಿಯಲ್ಲಿ ಕನ್ನಡಿಗ, ಲಕ್ನೋ ಸೂಪರ್‌ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಬ್ಯಾಟಿಂಗ್‌ ಆರ್ಭಟ ಜೋರಾಗಿದೆ. ಅಷ್ಟೇ ಅಲ್ಲದೆ ನಾಯಕ್ವದ ಮೂಲಕವೂ ಅನೇಕ ಹಿರಿಯ ಕ್ರಿಕೆಟಿಗರಿಂದ ಸೈ ಎನಿಸಿಕೊಂಡಿದ್ದಾರೆ.

ಈ ಬಾರಿ ಆವೃತ್ತಿಯಲ್ಲಿ ಈವರೆಗೂ ಆಡಿರುವ 10 ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ 2 ಶತಕ, 2 ಅರ್ಧಶತಕ ಸೇರಿ 451 ರನ್​​​ ಬಾರಿಸಿದ್ದಾರೆ. ಡೆಲ್ಲಿ ವಿರುದ್ಧದ ನಿನ್ನೆಯ (ಭಾನುವಾರದ) ಪಂದ್ಯದಲ್ಲಿ 51 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್, 4 ಫೋರ್​​ ಸಮೇತ ರಾಹುಲ್ 77 ರನ್ ಸಿಡಿಸಿದರು. ಈಗ 5 ಭರ್ಜರಿ ಸಿಕ್ಸರ್​​ಗಳೊಂದಿಗೆ ರಾಹುಲ್ ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದುವರೆಗೂ ರಾಹುಲ್ ಐಪಿಎಲ್​ನಲ್ಲಿ 150 ಸಿಕ್ಸರ್​​ಗಳನ್ನು ಪೂರೈಸಿದ್ದಾರೆ.

Edited By : Vijay Kumar
PublicNext

PublicNext

02/05/2022 07:28 am

Cinque Terre

38.36 K

Cinque Terre

1

ಸಂಬಂಧಿತ ಸುದ್ದಿ