ಮುಂಬೈ: ಋತುರಾಜ್ ಗಾಯಕ್ವಾಡ ಹಾಗೂ ಡೆವೊನ್ ಕಾನ್ವೆ ಅದ್ಭುತ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 203 ರನ್‌ಗಳ ಗುರಿ ನೀಡಿದೆ.
ಪುಣೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 46ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 2 ವಿಕೆಟ್ ನಷ್ಟಕ್ಕೆ 202 ರನ್ ಚಚ್ಚಿದೆ.
ಚೆನ್ನೈ ಪರ ಋತುರಾಜ್ ಗಾಯಕ್ವಾಡ 99 ರನ್, ಡೆವೊನ್ ಕಾನ್ವೆ ಅಜೇಯ 85 ರನ್, ನಾಯಕ ಧೋನಿ 8 ರನ್ ಗಳಿಸಿದರು.
PublicNext
01/05/2022 09:27 pm