ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಮೊಹ್ಸಿನ್ ಖಾನ್ ಕಮಾಲ್, ರಾಹುಲ್, ಹೂಡಾ ಅಬ್ಬರ- ಲಕ್ನೋ ದಾಳಿಗೆ ನಲುಗಿದ ಡೆಲ್ಲಿ

ಮುಂಬೈ: ಮೊಹ್ಸಿನ್ ಖಾನ್ ಬೌಲಿಂಗ್ ಕಮಾಲ್, ನಾಯಕ ಕೆ.ಎಲ್. ರಾಹುಲ್, ದೀಪಕ್ ಹೂಡಾ ಅರ್ಧಶತಕದ ಸಹಾಯದಿಂದ ಲಕ್ನೋ ಸೂಪರ್‌ ಜೈಂಟ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ವಿರುದ್ಧ 6 ರನ್‌ಗಳಿಂದ ರೋಚಕ ಜಯ ಸಾಧಿಸಿದೆ.

ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 45ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಲಕ್ನೋ ತಂಡವು 3 ವಿಕೆಟ್‌ ನಷ್ಟಕ್ಕೆ 195 ರನ್‌ ದಾಖಲಿಸಿತ್ತು.

ಬಳಿಕ ಬ್ಯಾಟಿಂಗ್ ‌ಮಾಡಿದ ಡೆಲ್ಲಿ ತಂಡವು 7 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಸೋಲು ಒಪ್ಪಿಕೊಂಡಿದೆ. ಡೆಲ್ಲಿ ಪರ ನಾಯಕ ರಿಷಭ್ ಪಂತ್ 44 ರನ್, ಮಿಚಲ್ ಮಾರ್ಷ್ 37 ರನ್ ಹಾಗೂ ಅಕ್ಷರ್ ಪಟೇಲ್ ಅಜೇಯ 42 ರನ್ ಗಳಿಸಿದರು.

ಇನ್ನು ಲಕ್ನೋ ಪರ ಮೊಹ್ಸಿನ್ ಖಾನ್ 4 ಓವರ್ ಬೌಲಿಂಗ್ ಮಾಡಿ ಕೇವಲ 16 ರನ್ ನೀಡಿ 4 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಇನ್ನು ದುಷ್ಯಂತ್ ಚಮೀರ, ಕೃಷ್ಣಪ್ಪ ಗೌತಮ್ ಹಾಗೂ ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದುಕೊಂಡರು‌.

ಇದಕ್ಕೂ ಮುನ್ನ ಲಕ್ನೋ ತಂಡದ ಪರ ನಾಯಕ ಕೆ.ಎಲ್.ರಾಹುಲ್ 77 ರನ್ (51 ಎಸೆತ, 4 ಬೌಂಡರಿ, 5 ಸಿಕ್ಸರ್), ದೀಪಕ್ ಹೂಡಾ 52 ರನ್ (34 ಎಸೆತ), ಕ್ವಿಂಟನ್ ಡಿ ಕಾಕ್ 23 ರನ್ (13 ಎಸೆತ), ಮಾರ್ಕಸ್ ಸ್ಟೊಯಿನಿಸ್ ಅಜೇಯ 17 ರನ್ ಹಾಗೂ ಕೃನಾಲ್ ಪಾಂಡ್ಯ ಅಜೇಯ 9 ರನ್ ಗಳಿಸಿದ್ದರು. ಇನ್ನು ಡೆಲ್ಲಿ ಪರ ಶಾರ್ದುಲ್ ಠಾಕೂರ್ ಮಾತ್ರ ವಿಕೆಟ್ ಪಡೆಯಲು ಶಕ್ತರಾಗಿದ್ದರು. ಅವರು 3 ವಿಕೆಟ್ ಪಡೆದು ಮಿಂಚಿದ್ದರು.

Edited By : Vijay Kumar
PublicNext

PublicNext

01/05/2022 07:41 pm

Cinque Terre

49.01 K

Cinque Terre

1

ಸಂಬಂಧಿತ ಸುದ್ದಿ