ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿನೇ ಮತ್ತೆ ನಾಯಕ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಹೀನಾಯವಾಗಿಯೇ ಸೋಲು ಕಾಣುತ್ತಿದೆ. ನಾಯಕ ರವೀಂದ್ರ ಜಡೇಜಾ ಈ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದಾರೆ. ಈಗ ಅದಕ್ಕೊಂದು ದಾರಿಯನ್ನೂ ಕೊಂಡು ಹಿಡಿದಿದ್ದಾರೆ. ಬನ್ನಿ, ಹೇಳ್ತಿವಿ.

ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಆಡಿರೋ ಎಂಟು ಪಂದ್ಯಗಳಲ್ಲಿ ಕೇವಲ ಎರಡೇ ಎರಡು ಮ್ಯಾಚ್ ಗೆದಿದ್ದೆ ಅಷ್ಟೆ.

ಈ ಒಂದು ಕಾರಣಕ್ಕೇನೆ ಆಟದ ಮೇಲೆ ಫೋಕಸ್ ಮಾಡಿದರೇನೇ ಒಳ್ಳೆಯದು ಅಂತಲೇ ರವೀಂದ್ರ ಜಡೇಜಾ, ತಮ್ಮ ನಾಯಕತ್ವವನ್ನ ಎಮ್.ಎಸ್.ಧೋನಿ ಹಸ್ತಾಂತರಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಲು ಸಾಕಷ್ಟು ಕಷ್ಟಪಡಬೇಕಿದೆ. ಇರೋ 6 ಪಂದ್ಯಗಳನ್ನ ಈ ತಂಡ ಗೆಲ್ಲಬೇಕು. ಆಗಲೇ ಪ್ಲೇ ಆಫ್ ಪ್ರವೇಶ ಸಾಧ್ಯವಾಗುತ್ತದೆ.

Edited By :
PublicNext

PublicNext

30/04/2022 08:00 pm

Cinque Terre

48.78 K

Cinque Terre

3