ಮುಂಬೈ: ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 6 ವಿಕೆಟ್ಗಳಿಂದ ಗೆದ್ದು ಬೀಗಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಟೂರ್ನಿಯ ಭಾಗವಾಗಿ ನಡೆದ 43ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸ್ಸಿಸ್ ಬ್ಯಾಟಿಂಗ್ ಆಯ್ದುಕೊಂಡು ಅಚ್ಚರಿ ಮೂಡಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 3 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 174 ರನ್ ಚಚ್ಚಿ ಗೆದ್ದು ಬೀಗಿದೆ. ಗುಜರಾತ್ ಪರ ಡೇವಿಡ್ ಮಿಲ್ಲರ್ ಅಜೇಯ 39 ರನ್, ರಾಹುಲ್ ತೇವಾಟಿಯಾ ಅಜೇಯ 43 ರನ್, ಶುಭ್ಮನ್ ಗಿಲ್ 31 ರನ್ ಹಾಗೂ ವೃದ್ಧಿಮಾನ್ ಸಾಹ 29 ರನ್ ಗಳಿಸಿದರು.
ಆರ್ಸಿಬಿ ಪರ ವಿರಾಟ್ ಕೊಹ್ಲಿ 58 ರನ್ (53 ಎಸೆತ), ರಜತ್ ಪಟಿದಾರ್ 52 ರನ್ (32 ಎಸೆತ) ಹಾಗೂ ಗ್ಲೇನ್ ಮ್ಯಾಕ್ಸ್ವೆಲ್ 33 ರನ್ ಗಳಿಸಿದ್ದರು. ಇನ್ನು ಗುಜರಾತ್ ಟೈಟಾನ್ಸ್ ಪರ ಪ್ರದೀಪ್ ಸಾಂಗ್ವಾನ್ 2 ವಿಕೆಟ್, ಮೊಹಮ್ಮದ್ ಶಮಿ, ರಶೀದ್ ಖಾನ್, ಅಲ್ಜಾರಿ ಜೋಸೆಫ್ ಹಾಗೂ ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದುಕೊಂಡಿದ್ದರು.
PublicNext
30/04/2022 07:26 pm