ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗೆ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಒಂದು ಒಳ್ಳೆ ಸಲಹೆ ಕೊಟ್ಟಿದ್ದಾರೆ. ಈ ಸಲಹೆಯನ್ನ ಕೊಹ್ಲಿ ಹೇಗೆ ತೆಗೆದುಕೊಳ್ತಾರೋ ಏನೋ. ಆದರೆ, ಹೇಳಿದ ಮಾತು ಮೋಟಿವೇಟ್ ಮಾಡುತ್ತದೆ.
ವಿರಾಟ್ ಕೊಹ್ಲಿ ಸದ್ಯ ತಮ್ಮ ಫಾಮ್ ಕಳೆದುಕೊಂಡಿದ್ದಾರೆ. ಅತ್ಯುತ್ತಮ ಆಟದಿಂದಲೇ ವಿರಾಟ್ ಕಮ್ ಬ್ಯಾಕ್ ಮಾಡ್ತಾರೆ ಅನ್ನೋ ನಂಬಿಕೆ ಫ್ಯಾನ್ಸ್ ಇದ್ದರು. ಆದರೆ, ಐಪಿಎಲ್ ಪಂದ್ಯ ನೋಡಿದವರಿಗೆ ತೀರ ಬೇಸರವೇ ಆಗುತ್ತಿದೆ.
ಇದನ್ನೆಲ್ಲ ಗಮನಿಸಿರೋ ಮಾಜಿ ಆಟಗಾರ ಯುವರಾಜ್ ಸಿಂಗ್, ಈ ಒಂದು ಬೆಳವಣಿಗೆಯಿಂದ ವಿರಾಟ್ ಮನಸ್ಸು ನೊಂದು ಹೋಗಿದೆ. ಮನಸ್ಥಿತಿನೂ ಕೆಟ್ಟು ಹೋದಂತೆ ಇದೆ. ಹಾಗಾಗಿಯೇ ವಿರಾಟ್ ಎಲ್ಲವನ್ನೂ ಬಿಟ್ಟು ಬ್ಯಾಟಿಂಗ್ ಮೇಲೇನೆ ಫೋಕಸ್ ಮಾಡಬೇಕಿದೆ. ಮುಕ್ತವಾಗಿಯೇ ಬ್ಯಾಟ್ ಬೀಸಿದರೇ ಸಾಕು. ವಿರಾಟ್ ಅತ್ಯುತ್ತಮ ಪರ್ಫಾರ್ಮರ್ ಆಗಿಯೇ ಮತ್ತೆ ಹೊಳೆಯುತ್ತಾರೆ ಎಂದು ವಿಯು ಹೇಳಿದ್ದಾರೆ.
PublicNext
29/04/2022 12:33 pm