ಮುಂಬೈ: ರಾಯಲ್ ಚಾಲೆಂಜರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ನಡುವಿನ ಪಂದ್ಯದಲ್ಲಿ ಹರ್ಷಲ್ ಪಟೇಲ್, ರಿಯಾನ್ ಪರಾಗ್ ಕಿತ್ತಾಟ ಭಾರಿ ಚರ್ಚೆಗೆ ಕಾರಣವಾಗಿದೆ.
ರಾಜಸ್ಥಾನ್ ಇನ್ನಿಂಗ್ಸ್ ಮುಗಿದ ನಂತರ ಪರಾಗ್ ಮತ್ತು ಹರ್ಷಲ್ ಪಟೇಲ್ ನಡುವಿನ ಮಾತಿನ ಯುದ್ಧದವೇ ನಡೆಯಿತು. ಬೌಲಿಂಗ್ ಮುಗಿಸಿ ಹೊರಟ್ಟಿದ್ದ ಹರ್ಷಲ್ ಪಟೇಲ್‌ಗೆ ಥ್ಯಾಂಕ್ಸ್ ಕೊಡಲು ಪರಾಗ್ ಮುಂದಾದರು. ಆದರೆ ಹರ್ಷಲ್ ಕೈ ನೀಡದೇ ಮುಂದಕ್ಕೆ ಸಾಗಿದ್ದರು, ಇದರಿಂದ ಅಚ್ಚರಿಗೊಂಡ ಪರಾಗ್, ಹರ್ಷಲ್ ಕುರಿತು ಏನೋ ಹೇಳಿದ್ರು. ಇದನ್ನು ಕೇಳಿಸಿಕೊಂಡು ಗರಂ ಆದ ಹರ್ಷಲ್, ಪರಾಗ್ರತ್ತ ಮುನ್ನಗಿ ಬಂದರು. ಈ ವೇಳೆ ಆರ್ಆರ್ ತಂಡದ ಸಹಾಯಕ ಸಿಬ್ಬಂದಿ ಮಧ್ಯ ಪ್ರವೇಶ ಮಾಡಿ ಹರ್ಷಲ್ರನ್ನು ತಡೆದರು.
ಅಷ್ಟೇ ಅಲ್ಲದೆ ಪಂದ್ಯದ ಮುಕ್ತಾಯದ ಬಳಿಕ ರಿಯಾನ್ ಪರಾಗ್ ಅವರು ಹರ್ಷಲ್ ಪಟೇಲ್‌ಗೆ ಹಸ್ತಲಾಘವ ಮಾಡಲು ಮುಂದಾದರು. ಇದನ್ನು ನೋಡಿದ ಹರ್ಷಲ್ ಪಟೇಲ್ ಕೈ ಕುಲುಕದೆ ಮುಂದೆ ಸಾಗಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
27/04/2022 10:44 am