ಬೆಂಗಳೂರು: ಟೀಂ ಇಂಡಿಯಾ ಮಾಜಿ ಆಟಗಾರ, ಆರಂಭಿಕ ಬ್ಯಾಟರ್ ಅರುಣ್ ಲಾಲ್ 66 ವಯಸ್ಸಿನಲ್ಲಿ ತಮ್ಮ ವೈವಾಹಿಕ ಜೀವನದ ಎರಡನೇ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಹೌದು. ಅರುಣ್ ಲಾಲ್ ಅವರು ತಮ್ಮ ಹುಟ್ಟೂರು ಕೋಲ್ಕತಾದಲ್ಲಿ 2022ರ ಮೇ 2ರಂದು ಎರಡನೇ ಮದುವೆಯಾಗಲಿದ್ದಾರೆ. ಅರುಣ್ ಲಾಲ್ ತಮ್ಮ ಪ್ರೇಯಸಿ 38 ವರ್ಷದ ಬುಲ್ ಬುಲ್ ಸಹಾ ಅವರೊಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಹಲವು ವರ್ಷಗಳಿಂದ ಜೊತೆಗಿರುವ ಈ ಜೋಡಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅರುಣ್ ಲಾಲ್, ಕೆಲ ಸಮಯ ಹಿಂದಷ್ಟೇ ತಮ್ಮ ಮೊದಲ ಪತ್ನಿ ರೀನಾ ಅವರಿಂದ ವಿಚ್ಛೇದನ ಪಡೆದಿದ್ದರು. ಅನಾರೋಗ್ಯದಿಂದ ಬಳಲಿರುವ ರೀನಾ ಅವರೊಟ್ಟಿಗೆ ಅರುಣ್ ಲಾಲ್ ಈಗಲೂ ಉಳಿದಿದ್ದು, ಎರಡನೇ ವಿವಾಹ ನಂತರವೂ ಆರೋಗ್ಯ ಸಮಸ್ಯೆಯಿಂದ ಬಳಲಿರುವ ತಮ್ಮ ಮೊದಲ ಪತ್ನಿಯ ಆರೈಕೆ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಮೊದಲ ಪತ್ನಿಯ ಅನುಮತಿ ಮೇರೆಗೆ ವಿಚ್ಛೇದನ ಪಡೆದು, ಎರಡನೇ ಮದುವೆಗೆ ಮದನ್ ಲಾಲ್ ಮುಂದಾಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
PublicNext
26/04/2022 03:50 pm