ಮುಂಬೈ: ಕೆ.ಎಲ್. ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಮುಂಬೈ ಆಲ್‌ರೌಂಡರ್ ವಿಕೆಟ್ ಪಡೆದು ಕೃನಾಲ್ ಸಂಭ್ರಮಿಸಿದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಮುಂಬೈ ಮತ್ತು ಲಕ್ನೋ ತಂಡಗಳ ನಡುವಿನ ಪಂದ್ಯದ ಅಂತಿಮ ಓವರ್‌ನ್ನು ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡಿದರೆ. ಕೀರನ್ ಪೊಲಾರ್ಡ್ ಮೊದಲನೇ ಎಸೆತವನ್ನು ಎದುರಿಸಿದರು. ಮೊದಲನೇ ಎಸೆತದಲ್ಲಿಯೇ ಕೀರನ್ ಪೊಲಾರ್ಡ್ ದೀಪಕ್ ಹೂಡಾಗೆ ಕ್ಯಾಚ್ ನೀಡಿ ಬೇಸರದಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಕೃನಾಲ್ ಪಾಂಡ್ಯ ಪೊಲಾರ್ಡ್ ಮೇಲೆ ಹಾರಿ ತಬ್ಬಿಕೊಂಡು ಪೊಲಾರ್ಡ್ ತಲೆಗೆ ಮುತ್ತಿಟ್ಟಿದ್ದಾರೆ. ಹೀಗೆ ವಿಕೆಟ್ ಪಡೆದ ಬರದಲ್ಲಿ ಕೃನಾಲ್ ಪಾಂಡ್ಯ ಸಂಭ್ರಮಿಸಿದ ರೀತಿ ವಿವಾದದ ರೂಪ ಪಡೆದುಕೊಂಡಿದೆ.
ಕೃನಾಲ್ ಪಾಂಡ್ಯ ನಡೆಗೆ ಕೀರನ್ ಪೊಲಾರ್ಡ್ ಕೋಪಗೊಂಡಿದ್ದಾರೆ. ಕಳೆದ ಆವೃತ್ತಿಗಳಲ್ಲಿ ಈ ಇಬ್ಬರೂ ಒಂದೇ ತಂಡದ ಪರ ಕಣಕ್ಕಿಳಿದು ಪರಸ್ಪರ ಉತ್ತಮ ಸ್ನೇಹವನ್ನು ಹೊಂದಿದ್ದರೂ ಸಹ ಈ ಬಾರಿ ಮುಂಬೈ ಇಂಡಿಯನ್ಸ್ ಸಾಲು ಸಾಲು ಸೋಲು ಕಂಡಿರುವ ಕಾರಣ ಕೀರನ್ ಪೊಲಾರ್ಡ್ ಮೊದಲೇ ಬೇಸರದಲ್ಲಿದ್ದರು. ಇಂಥ ಸಂದರ್ಭದಲ್ಲಿ ಕೃನಾಲ್ ಪಾಂಡ್ಯ ಈ ರೀತಿ ನಡೆದುಕೊಂಡದ್ದು ಪೊಲಾರ್ಡ್‌ಗೆ ಇಷ್ಟವಾಗಲಿಲ್ಲ ಎಂಬುದು ಪೊಲಾರ್ಡ್ ಮುಖದ ಹಾವಭಾವದಲ್ಲೇ ತಿಳಿಯುತ್ತಿತ್ತು.
PublicNext
25/04/2022 01:35 pm