ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿನ್ನೆ (ಭಾನುವಾರ) ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 36 ರನ್‌ಗಳಿಂದ ಗೆದ್ದು ಬೀಗಿದೆ. ಅದರಲ್ಲೂ ಮುಂಬೈಗೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದ ಸೂರ್ಯಕುಮಾರ್ ಯಾದವ್ ವಿಕೆಟ್ ಉರುಳಿಸುವಲ್ಲಿ ಲಕ್ನೋ ತಂಡದ ನಾಯಕ ಕೆ.ಎಲ್.ರಾಹುಲ್ ಹಾಕಿದ ಮಾಸ್ಟರ್ ಪ್ಲ್ಯಾನ್‌ಗೆ ಕ್ರಿಕೆಟ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಹೌದು. ಈ ಬಾರಿಯ ಆವೃತ್ತಿಯ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಯುವಕ ಆಟಗಾರ ಆಯುಷ್ ಬಡೋನಿ ನಾಯಕ ಕೆ.ಎಲ್.ರಾಹುಲ್ ಇಟ್ಟ ಭರವಸೆಯನ್ನು ಸರಿಯಾಗಿದ್ದಾರೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆಯುಷ್ ಬಡೋನಿ ಬೌಲಿಂಗ್ ಮಾಡಿದ್ದಾರೆ. ಅವರು ಮುಂಬೈ ಇನ್ನಿಂಗ್ಸ್‌ನ 12ನೇ ಓವರ್‌ನ ಎರಡನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರ ದೊಡ್ಡ ವಿಕೆಟ್ ಪಡೆದರು. ಓವರ್‌ನ ಎರಡನೇ ಬಾಲ್‌ನಲ್ಲಿ, ಸೂರ್ಯ ಲೆಗ್ ಸೈಡ್ ಕಡೆಗೆ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಬ್ಯಾಟ್‌ನ ಎಡ್ಜ್ ಬಡಿದು ಸರಳ ಕ್ಯಾಚ್ ಅನ್ನು ನಾಯಕ ರಾಹುಲ್ ಹಿಡಿದರು. ಈ ವೇಳೆ ಆಯುಷ್ ಬಡೋನಿ, ಕೆ.ಎಲ್.ರಾಹುಲ್ ಸಂಭ್ರಮ ಮುಗಿಲು ಮುಟ್ಟಿತ್ತು.
PublicNext
25/04/2022 10:34 am