ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಂತರ ನಾಲ್ಕು ಶತಕಗಳನ್ನು ಸಿಡಿಸಿದ ಎರಡನೇ ಭಾರತೀಯ ಬ್ಯಾಟರ್ ಆಗಿದ್ದಾರೆ.
30 ವರ್ಷ ವಯಸ್ಸಿನ ಕೆ.ಎಲ್.ರಾಹುಲ್ ಇಂದು (ಭಾನುವಾರ) ಮುಂಬೈ ಇಂಡಿಯನ್ಸ್ ವಿರುದ್ಧ 61 ಎಸೆತಗಳಲ್ಲಿ ಶತಕ ಸಿಡಿಸಿದರು. ಐಪಿಎಲ್‌ನಲ್ಲಿ ಇದು ಅವರ ನಾಲ್ಕನೇ ಶತಕವಾಗಿದೆ. ಇನ್ನು ಐಪಿಎಲ್ 2022ರಲ್ಲಿ ಎರಡನೇ ಶತಕವಾಗಿದೆ. ವಿಶೇಷವೆಂದರೆ ಈ ಎರಡೂ ಶತಕಗಳು ಮುಂಬೈ ಇಂಡಿಯನ್ಸ್ ವಿರುದ್ಧವೇ ಬಂದಿವೆ. ಗಮನಾರ್ಹವೆಂದರೆ ಐಪಿಎಲ್‌ನಲ್ಲಿ ಕೊಹ್ಲಿ ಐದು ಶತಕಗಳನ್ನು ಬಾರಿಸಿದ್ದಾರೆ.
PublicNext
24/04/2022 10:37 pm