ಮುಂಬೈ: ಆಂಡ್ರೆ ರಸೆಲ್ ನೀಡಿದ ಬೌಲಿಂಗ್, ಸ್ಫೋಟಕ ಬ್ಯಾಟಿಂಗ್ ದಾಳಿಯ ನಡುವೆಯೂ ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಟೂರ್ನಿಯ ಭಾಗವಾಗಿ ನಡೆದ 35ನೇ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡು ಅಚ್ಚರಿ ಮೂಡಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ನಾಯಕ ಹಾರ್ದಿಕ್ ಪಾಂಡ್ಯ 67 ರನ್, ಡೇವಿಡ್ ಮಿಲ್ಲರ್ 27 ರನ್ ಹಾಗೂ ವೃದ್ಧಿಮಾನ್ ಸಹಾ 25 ರನ್ ಸಹಾಯದಿಂದ 9 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿ ಕೆಕೆಆರ್ 8 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ತಂಡದ ಪರ ಆಂಡ್ರೆ ರಸೆಲ್ 48 ರನ್ (25 ಎಸೆತ), ರಿಂಕು ಸಿಂಗ್ 35 ರನ್, ಉಮೇಶ್ ಯಾದವ್ .. ರನ್ ಗಳಿಸಿದರು. ಉಳಿದಂತೆ ನಾಯಕ ಶ್ರೇಯಸ್ ಅಯ್ಯರ್ (12 ರನ್), ಸ್ಯಾಮ್ ಬಿಲ್ಲಿಂಗ್ಸ್ (4 ರನ್), ನಿತೀಶ್ ರಾಣಾ (2 ರನ್), ಸುನಿಲ್ ನರೈನ್ (5 ರನ್) ಹಾಗೂ ವೆಂಕಟೇಶ್ ಅಯ್ಯರ್ (17 ರನ್) ಬ್ಯಾಟಿಂಗ್ ವೈಫಲ್ಯ ತೋರಿದರು.
ಇದಕ್ಕೂ ಮುನ್ನ ಕೆಕೆಆರ್ ಪರ ಆಂಡ್ರೆ ರಸೆಲ್ ಒಂದು ಓವರ್ ಬೌಲಿಂಗ್ ಮಾಡಿ ಪ್ರಮುಖ 4 ವಿಕೆಟ್ ಕಿತ್ತು ದಾಖಲೆ ಬರೆದಿದ್ದರು. ಇನ್ನು ಟಿಮ್ ಸೌಥಿ 3 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್ ಹಾಗೂ ಶಿವಂ ಮಾವಿ ತಲಾ 1 ವಿಕೆಟ್ ಪಡೆದಿದ್ದರು.
PublicNext
23/04/2022 07:35 pm