ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್‌ನಲ್ಲಿ ದಾಖಲೆ ಬರೆದ ಆಂಡ್ರೆ ರಸೆಲ್

ಮುಂಬೈ: ಗುಜರಾತ್ ಟೈಟಾನ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್ ನಡುವೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2022ರ ಟೂರ್ನಿಯ 35ನೇ ಪಂದ್ಯವು ಹೊಸ ದಾಖಲೆಗೆ ಸಾಕ್ಷಿಯಾಗಿದೆ.

ಹೌದು. ಐಪಿಎಲ್ ಇತಿಹಾಸದಲ್ಲಿ ವೇಗದ ಬೌಲರ್ ಒಂದು ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿರಲಿಲ್ಲ. ಆದರೆ ಗುಜರಾತ್ ತಂಡದ ಇನ್ನಿಂಗ್ಸ್‌ನ 20ನೇ ಓವರ್ ಬೌಲಿಂಗ್ ಮಾಡಿದ ಕೆಕೆಆರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅಭಿನವ್ ಮನೋಹರ್, ಲಾಕಿ ಫರ್ಗುಸನ್, ರಾಹುಲ್ ತೆವಾಟಿಯಾ ಮತ್ತು ಯಶ್ ದಯಾಲ್ ಅವರನ್ನು ಔಟ್ ಮಾಡಿದರು. ಇದು ರಸೆಲ್ ಅವರ ಇನ್ನಿಂಗ್ಸ್‌ನ ಏಕೈಕ ಓವರ್ ಆಗಿತ್ತು. ಅವರು 1 ಓವರ್‌ ಬೌಲಿಂಗ್ ಮಾಡಿ ಕೇವಲ 5 ರನ್ ನೀಡಿ 4 ವಿಕೆಟ್ ಉರುಳಿಸಿದರು.

Edited By : Vijay Kumar
PublicNext

PublicNext

23/04/2022 06:57 pm

Cinque Terre

36.13 K

Cinque Terre

0