ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಅರ್ಧತಕದ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 157 ರನ್‌ಗಳ ಸವಾಲು ನೀಡಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಟೂರ್ನಿಯ ಭಾಗವಾಗಿ ನಡೆಯುತ್ತಿರುವ 35ನೇ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡು ಅಚ್ಚರಿ ಮೂಡಿಸಿದರು. ಬೃಹತ್ ರನ್ ಮೊತ್ತದ ಗುರಿ ನೀಡುವ ಉದ್ದೇಶದಿಂದ ಮೊದಲು ಬ್ಯಾಟಿಂಗ್ ಮಾಡಿದ ಹಾರ್ದಿಕ್ ನೇತೃತ್ವದ ಗುಜರಾತ್ ತಂಡವು 9 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲು ಶಕ್ತವಾಯಿತು.
ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ 67 ರನ್, ಡೇವಿಡ್ ಮಿಲ್ಲರ್ 27 ರನ್ ಹಾಗೂ ವೃದ್ಧಿಮಾನ್ ಸಹಾ 25 ರನ್ ಗಳಿಸಿದರು. ಇನ್ನು ಕೆಕೆಆರ್ ಪರ ಆಂಡ್ರೆ ರಸೆಲ್ ಪ್ರಮುಖ 4 ವಿಕೆಟ್, ಟಿಮ್ ಸೌಥಿ 3 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್ ಹಾಗೂ ಶಿವಂ ಮಾವಿ ತಲಾ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
PublicNext
23/04/2022 05:45 pm