ಮುಂಬೈ: ಜೋಸ್ ಬಟ್ಲರ್ ಶತಕ, ಕನ್ನಡಿಗರಾದ ದೇವದತ್ ಪಡಿಕ್ಕಲ್ ಅರ್ಧಶತಕ ಹಾಗೂ ಪ್ರಸಿದ್ಧ್ ಕೃಷ್ಣ ಅದ್ಭುತ ಬೌಲಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್‌ಗಳಿಂದ ಗೆದ್ದು ಬೀಗಿದೆ.
ಐಪಿಎಲ್ 2022ರ ಭಾಗವಾಗಿ ನಡೆದ 34ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 2 ವಿಕೆಟ್ ನಷ್ಟಕ್ಕೆ 222 ರನ್ ಚಚ್ಚಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 8 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದರು. ಡೆಲ್ಲಿ ಪರ ನಾಯಕ ರಿಷಭ್ ಪಂತ್ 44 ರನ್, ಲಲಿತ್ ಯಾದವ್ 37 ರನ್, ಪೃಥ್ವಿ ಶಾ 37 ರನ್, ಡೇವಿಡ್ ವಾರ್ನರ್ 28 ರನ್ ಗಳಿಸಿದರು. ಇನ್ನು ರಾಜಸ್ಥಾನ್ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ 3 ವಿಕೆಟ್, ಆರ್. ಅಶ್ವಿನ್ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ರಾಜಸ್ಥಾನ್ ಪರ ಜೋಸ್ ಬಟ್ಲರ್ 116 ರನ್, ದೇವದತ್ ಪಡಿಕ್ಕಲ್ 54 ರನ್ ಹಾಗೂ ಸಂಜು ಸ್ಯಾಮ್ಸನ್ 46 ರನ್ ಬಾರಿಸಿದ್ದರು.ಈ ಮೂಲಕ ಐಪಿಎಲ್ 2022ರ ಆವೃತ್ತಿಯಲ್ಲಿ ಬಟ್ಲರ್ ತಮ್ಮ 3ನೇ ಶತಕ ದಾಖಲಿಸಿದ್ದಾರೆ.
PublicNext
22/04/2022 11:36 pm