ಉಲಾನ್ ಬಾತರ್, ಮಂಗೋಲಿಯ: ಭಾರತದ ಕುಸ್ತಿ ಕ್ರಿಡಾ ಪಟುಗಳಾದ ಅಂಶು ಮತ್ತು ರಾಧಿಕಾ ಬೆಳ್ಳಿ ಪದಕ ಗೆದ್ದಿದ್ದಾರೆ.ಮೊದಲ ಮೂರು ಬೌಟ್ ಗಳಲ್ಲಿ ಅಮೋಘ ಸಾಧನೆ ಮಾಡಿದ ಭಾರತದ ಅಂಶು ಮಲಿಕ್ ನಿರ್ಣಾಯಕ ಹಂತದಲ್ಲಿ ಮುಗ್ಗರಿಸಿದರು. ಹೀಗಾಗಿ ಏಷ್ಯನ್ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.
57 ಕೆಜಿ ವಿಭಾಗದ ಫೈನಲ್ ನಲ್ಲಿ ಅಂಶು ಅವರು ಜಪಾನ್ ನ ಸುಗುಮಿ ಸಕುರಾಯ್ ಗೆ ಮಣಿದರು. 65 ಕೆಜಿ ವಿಭಾಗದಲ್ಲಿ ರಾಧಿಕಾ ಬೆಳ್ಳಿ ಪದಕ ಗಳಿಸಿದರು. 62 ಕೆಜಿ ವಿಭಾಗದಲ್ಲಿ ಮನೀಷಾ ಕಂಚಿನ ಪದಕ ಗಳಿಸಿದರು.
PublicNext
22/04/2022 10:05 pm