ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022; ಮುಂಬೈಗೆ ಸತತ ಏಳನೇ ಸೋಲು- ಕೊನೆಯ ಎಸೆತದಲ್ಲಿ ಗೆದ್ದ ಚೆನ್ನೈ

ಮುಂಬೈ: ಅಂಬಾಟಿ ರಾಯ್ಡು ಸಮಯೋಚಿತ ಬ್ಯಾಟಿಂಗ್, ಎಂ.ಎಸ್. ಧೋನಿ ಮ್ಯಾಚ್ ಫಿನಿಸಿಂಗ್ ಶಾಟ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್‌ಗಳಿಂದ ಗೆದ್ದು ಬೀಗಿದೆ‌.

ಐಪಿಎಲ್ 2022ರ ಭಾಗವಾಗಿ ನಡೆದ 33ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ‌ಮಾಡಿದ ಮುಂಬೈ ತಂಡವು 7 ವಿಕೆಟ್ ನಷ್ಟಕ್ಕೆ 155 ರನ್‌ಗಳ ಗುರಿ ನೀಡಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ಗೆದ್ದು ಬೀಗಿದೆ‌‌. ಚೆನ್ನೈ ಪರ ಅಂಬಾಟಿ ರಾಯ್ಡು 40 ರನ್, ರಾಬಿನ್ ಉತ್ತಪ್ಪ 30 ರನ್, ಎಂ.ಎಸ್. ಧೋನಿ ಅಜೇಯ 28 ರನ್ ಚೆಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು.

Edited By : Vijay Kumar
PublicNext

PublicNext

21/04/2022 11:33 pm

Cinque Terre

59.26 K

Cinque Terre

4

ಸಂಬಂಧಿತ ಸುದ್ದಿ