ಐಪಿಎಲ್ 15 ನೇ ಆವೃತ್ತಿ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲಾ ತಂಡಗಳು ಟೇಬಲ್ ಪಾಯಿಂಟ್ ಗಳ ಅಗ್ರಸ್ಥಾನವನ್ನು ತಲುಪಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿವೆ. ಅದೇ ರೀತಿ ಮೈದಾನದ ಹೊರಗೆ ಆಟಗಾರರ ಮೋಜು ಮಸ್ತಿಯ ಫೋಟೋಗಳು, ವಿಡಿಯೋಗಳೂ ಹೊರಬರುತ್ತಿವೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ (CSK) ಡೆವೊನ್ ಕಾನ್ವೆ (Devon Conway) ಪ್ರೀ ವೆಡ್ಡಿಂಗ್ ಪಾರ್ಟಿ ಅನ್ನು ಆಯೋಜಿಸಿದ್ದಾರೆ.
ಈ ಪಾರ್ಟಿಯಲ್ಲಿ CSK ತಂಡದ ಎಲ್ಲಾ ಆಟಗಾರರು ಚೆನ್ನೈನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್ ವೇ ಮತ್ತು ಅವರು ತಮ್ಮ ಫಿಯಾನ್ಸಿ ಕಿನ್ ವ್ಯಾಟ್ಸನ್ ಅವರನ್ನು ಮದುವೆಯಾಗುವ ಮೊದಲು ಈ ಪಾರ್ಟಿಯನ್ನು ಆಯೋಜಿಸಿದ್ದಾರೆ.ಈ ಫೋಟೋಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
PublicNext
21/04/2022 10:07 pm