ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ತಂಡವು ಸರ್ವಪತನ ಕಂಡಿದೆ. ಇದರೊಂದಿಗೆ ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ಗೆ 116 ರನ್‌ಗಳ ಸಾಧಾರಣ ಗುರಿ ನೀಡಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 32ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬೌಲಿಂಗ್ ಮಾಡಿದ ಪಂಜಾಬ್ ತಂಡವು ಎಲ್ಲಾ 10 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದೆ.
ಪಂಜಾಬ್ ಪರ ಜಿತೇಶ್ ಶರ್ಮಾ 32 ರನ್, ಮಯಾಂಕ್ ಅಗರ್ವಾಲ್ 24 ರನ್ ಗಳಿಸಿದರು. ಉಳಿದಂತೆ ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಎಂ ಶಾರುಖ್ ಖಾನ್ ಬ್ಯಾಟಿಂಗ್ ವೈಫಲ್ಯ ತೋರಿದರು. ಇನ್ನು ಡೆಲ್ಲಿ ಪರ ಖಲೀಲ್ ಅಹಮದ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಉರುಳಿಸಿದರೆ, ಮುಸ್ತಫಿಜುರ್ ರೆಹಮಾನ್ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
PublicNext
20/04/2022 09:23 pm