ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮಾನಸಿಕ ಒತ್ತಡದಲ್ಲಿರುವ ಕೊಹ್ಲಿಗೆ ವಿಶ್ರಾಂತಿ ಅಗತ್ಯವಿದೆ'

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ದೇಶಕ್ಕಾಗಿ ಕನಿಷ್ಠ ಆರರಿಂದ ಏಳು ವರ್ಷಗಳವರೆಗೂ ಆಡಬೇಕಾದರೆ, ವಿರಾಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿರುವ ರವಿಶಾಸ್ತ್ರಿ, 'ಸದ್ಯದ ಪರಿಸ್ಥಿತಿಯಲ್ಲಿ ಯಾರಿಗಾದರೂ ವಿರಾಮ ಬೇಕಿದೆ ಎಂದಾದರೆ. ಅದು ಮಾನಸಿಕ ಒತ್ತಡದಲ್ಲಿರುವ ವಿರಾಟ್‌ ಕೊಹ್ಲಿಗೆ. ಕೋವಿಡ್‌ ನಿರ್ಬಂಧಗಳ ನಡುವೆ ಐಪಿಎಲ್ ಬಯೋಬಬಲ್‌ನಲ್ಲಿರುವ ಕೊಹ್ಲಿ ಎಚ್ಚರಿಕೆಯಿಂದ ಆಡುವುದು ಅಗತ್ಯವಿದೆ' ಎಂದು ಹೇಳಿದ್ದಾರೆ.

ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ, ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಲು ಪರದಾಡುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕೌಟ್‌ಗೆ ಗುರಿಯಾದರು.

Edited By : Vijay Kumar
PublicNext

PublicNext

20/04/2022 02:55 pm

Cinque Terre

37.35 K

Cinque Terre

1

ಸಂಬಂಧಿತ ಸುದ್ದಿ