ಮುಂಬೈ: ಐಪಿಎಲ್ 2020ರ ಪಂದ್ಯದಲ್ಲಿ ಅಂದಿನ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಸ್ಲೆಡ್ಜಿಂಗ್ ಮಾಡಿದ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, "ಅಂದಿನ ಪಂದ್ಯವು ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿತ್ತು. ಹೀಗಾಗಿ ವಿರಾಟ್ ಅವರ ಸ್ಲೆಡ್ಜಿಂಗ್ ಮತ್ತೊಂದು ಮಟ್ಟದಲ್ಲಿತ್ತು. ನಾನು ಚೂಯಿಂಗ್ ಗಮ್ ಅಗಿಯುತ್ತಾ ಎದುರಾಳಿಗೆ ಭಯವಿಲ್ಲದಂತೆ ನಿಂತಿದ್ದೆ. ಆದರೆ ಒಳಗಿನಿಂದ ನಾನು ಸಂಪೂರ್ಣವಾಗಿ ಭಯಭೀತನಾಗಿದ್ದೆ. ನನ್ನ ಹೃದಯದ ಬಡಿತ ಜೋರಾಗಿತ್ತು. ನನ್ನೊಳಗಿನ ಧ್ವನಿಯು ಕಿರುಚುತ್ತಿತ್ತು" ಎಂದು ಹೇಳಿಕೊಂಡಿದ್ದಾರೆ.
ಅಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಸಹಾಯದಿಂದ ಮುಂಬೈ ಗೆದ್ದು ಬೀಗಿತ್ತು.
PublicNext
19/04/2022 04:47 pm