ಮ್ಯಾಂಚೆಸ್ಟರ್: ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರ ನವಜಾತ ಗಂಡು ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಕ್ರಿಸ್ಟಿಯಾನೋ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದುಃಖ ಹಂಚಿಕೊಂಡಿದ್ದು, 'ನಾನು ಮತ್ತು ನನ್ನ ಗರ್ಲ್ ಫ್ರೆಂಡ್ ಜಾರ್ಜಿನಾ ರೊಡ್ರಿಗಸ್ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದೆವು. ಅವಳಿ ಮಕ್ಕಳಲ್ಲಿ ನವಜಾತ ಗಂಡು ಮಗು ಸಾನವನ್ನಪ್ಪಿದ್ದು, ಹೆಣ್ಣು ಮಗು ಬದುಕುಳಿದಿದೆ. ಇದು ಯಾವುದೇ ಪೋಷಕರು ಅನುಭವಿಸಲಾಗದ ದೊಡ್ಡ ನೋವಾಗಿದೆ. ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣವನ್ನು ಸ್ವಲ್ಪ ಭರವಸೆಯಿಂದ ಬದುಕಲು ನಮಗೆ ಶಕ್ತಿ ನೀಡಿದೆ' ಎಂದು ಭಾವನ್ಮಾಕವಾಗಿ ಬರೆದುಕೊಂಡಿದ್ದಾರೆ.
PublicNext
19/04/2022 04:03 pm