ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಯ ಭಾಗವಾಗಿ ನಿನ್ನೆ (ಭಾನುವಾರ) ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ ನಡುವಣ ಕಾದಾಟ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಶಿಮ್ರೋನ್ ಹೆಟ್ಮೆಯರ್ ಜವಾಬ್ದಾರಿಯುತ ಬ್ಯಾಟಿಂಗ್ 6 ವಿಕೆಟ್‌ಗೆ 165 ರನ್ ಪೇರಿಸಿತ್ತು. ಪ್ರತಿಯಾಗಿ ಲಕ್ನೋ ತಂಡವು 8 ವಿಕೆಟ್‌ಗೆ 162 ರನ್‌ಗಳಿಸಿ ಸೋಲು ಒಪ್ಪಿಕೊಂಡಿತು.
ಈ ಪಂದ್ಯದಲ್ಲಿ ಅಂಪೈರ್ ನೀಡಿದ ನಿರ್ಧಾರ ಕೂಡ ವಿವಾದಕ್ಕೂ ಕಾರಣವಾಯಿತು. ಇದೀಗ ಸಾಮಾಜಿಕ ಜಾಲತಾಣಗಲ್ಲಿ ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಂಪೈರ್ ನೀಡಿದ ತಪ್ಪು ತೀರ್ಮಾನದಿಂದ ರಾಜಸ್ಥಾನ್ ತಂಡದ ಲೆಗ್ ಸ್ನಿನ್ನರ್ ಯಜುವೇಂದ್ರ ಚಹಲ್ ಸಿಟ್ಟಿಗೆದ್ದ ಘಟನೆ ಕೂಡ ನಡೆಯಿತು.
ಲಕ್ನೋ ಇನ್ನಿಂಗ್ಸ್‌ನ ವೇಳೆ ಚಹಲ್ 18ನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್ನ 5ನೇ ಎಸೆತದಲ್ಲಿ ಚಹಲ್ ಚೆಂಡು ಟರ್ನ್ ಪಡೆದು ಕೊಂಚ ರೈಟ್ ಸೈಡ್ನಲ್ಲಿ ಹೋಯಿತು. ಇದನ್ನು ಅಂಪೈರ್ ವೈಡ್ ಎಂದು ಪ್ರಕಟಿಸಿದರು. ಆದರೆ ಚೆಂಡು ವೈಡ್ ಕೊಡುವಷ್ಟು ದೂರಕ್ಕೆ ಹೋಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಚಹಲ್ ಅಂಪೈರ್ ಬಳಿ ವಾದಕ್ಕಿಳಿದರು. ಅತ್ತ ನಾಯಕ ಸ್ಯಾಮ್ಸನ್ ಕೂಡ ನಿರ್ಧಾರದಿಂದ ಬೇಸರಗೊಂಡು ಏನಿದು ಎಂದು ಕೇಳಿದರು. ಆದ ಅಂಪೈರ್ ತೀರ್ಮಾನವೇ ಅಂತಿಮ ನಿರ್ಧಾರವಾಗಿದ್ದರಿಂದ ಒಲ್ಲದ ಮನಸ್ಸಿನಿಂದ ಚಹಲ್ ತಮ್ಮ ಮುಂದಿನ ಎಸೆತವನ್ನು ಹಾಕಲು ತೆರಳಿದರು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
PublicNext
11/04/2022 07:02 pm