ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಖ್ಯಾತ ಆಟಗಾರ ಹರ್ಷಲ್ ಪಟೇಲ್ ಸಹೋದರಿ ನಿಧನವಾಗಿದ್ದು, ಇದೀಗ ಪಟೇಲ್ ತಮ್ಮ ಕುಟುಂಬವನ್ನು ಸೇರಲು ಬಯೋ ಬಬಲ್ ತೊರೆದಿದ್ದಾರೆ. ಗೆಲುವಿನ ಖುಷಿಯಲ್ಲಿದ್ದ ಬೆಂಗಳೂರು ತಂಡಕ್ಕೆ ಆಘಾತವಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದ ಗೆಲುವಿನ ಬೆನ್ನಲ್ಲೇ ಹರ್ಷಲ್ ಪಟೇಲ್ ಅವರಿಗೆ ಸಹೋದರಿ ನಿಧನದ ಸುದ್ದಿ ತಿಳಿದಿತ್ತು. ಕೂಡಲೇ ಅವರು ಬಯೋ ಬಬಲ್ ತೊರೆದು ಕುಟುಂಬವನ್ನು ಸೇರಿಕೊಂಡಿದ್ದಾರೆ. ಅಂತ್ಯಕ್ರೀಯೆಯ ಬೆನ್ನಲ್ಲೇ ಹರ್ಷಲ್ ಪಟೇಲ್ ಮತ್ತೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ವರದಿಯ ಪ್ರಕಾರ ಮಂಗಳವಾರ (ಏಪ್ರಿಲ್ 12) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮೊದಲೇ ಅವರು IPL ಬಯೋ-ಬಬಲ್‌ಗೆ ಮರಳುತ್ತಾರೆ ಎನ್ನಲಾಗುತ್ತಿದೆ.
PublicNext
10/04/2022 11:07 pm