ಮುಂಬೈ: ಪೃಥ್ವಿ ಶಾ, ಡೇವಿಡ್ ವಾರ್ನರ್ ಅಬ್ಬರದ ಅರ್ಧಶತಕದ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ಗೆ 216 ರನ್‌ಗಳ ಗುರಿ ನೀಡಿದೆ.
ಐಪಿಎಲ್ 2022ರ ಟೂರ್ನಿ ಭಾಗವಾಗಿ ನಡೆಯುತ್ತಿರುವ 19ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು.ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ. ತಂಡದ ಪರ ಪೃಥ್ವಿ ಶಾ 51 ರನ್ ಹಾಗೂ ಡೇವಿಡ್ ವಾರ್ನರ್ 61 ರನ್ ಗಳಿಸಿದರು.
PublicNext
10/04/2022 05:47 pm