ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಜೊತೆ ನಡೆದಿದ್ದ ಗಲಾಟೆಯ ಬಗ್ಗೆ ದೀಪಕ್ ಹೂಡಾ ಮೌನ ಮುರಿದಿದ್ದಾರೆ.
"ನಾನು ಮತ್ತು ಕೃನಾಲ್ ಐಪಿಎಲ್‌ನ ಲಕ್ನೋ ತಂಡದ ಭಾಗವಾಗಿದ್ದೇವೆ. ಇಬ್ಬರೂ ಒಂದೇ ಉದ್ದೇಶದಿಂದ ಆಡುತ್ತಿದ್ದೇವೆ. ಕೃನಾಲ್ ನನ್ನ ಸಹೋದರ. ಸಹೋದರರ ನಡುವೆ ಜಗಳ ಸರ್ವೆ ಸಾಮಾನ್ಯ" ಎಂದು ದೀಪಕ್ ಹೂಡಾ ಹೇಳಿದ್ದಾರೆ.
ಕಳೆದ ವರ್ಷದ ಸೈಯದ್ ಮುಷ್ತಾಕ್ ಅಲಿ ಟೂರ್ನಿ ವೇಳೆ ಬರೋಡಾ ತಂಡದ ನಾಯಕರಾಗಿದ್ದ ಕೃನಾಲ್ ಪಾಂಡ್ಯ, ನನ್ನನ್ನು ನಿಂದಿಸುತ್ತಾರೆ ಎಂದು ಹೂಡಾ ಆರೋಪಿಸಿದ್ದರು. ಬಳಿಕ ಬರೋಡಾ ತಂಡ ತೊರೆದು ರಾಜಸ್ಥಾನ ಪರ ಆಡಿದ್ದರು. ಆದರೆ ಈಗ ಐಪಿಎಲ್ನಲ್ಲಿ ಇಬ್ಬರೂ, ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದಾರೆ.
PublicNext
08/04/2022 03:40 pm